Uncategorised
ಶಿವಮೊಗ್ಗ | ಮನೆಗಳ ಗಣತಿ ಕಾರ್ಯ ಆರಂಭ

ಶಿವಮೊಗ್ಗ ಜಿಲ್ಲೆಯಲ್ಲಿ 2027ರ ಜನಗಣತಿ ಮೊದಲ ಹಂತದ ಭಾಗವಾಗಿ, ಏಪ್ರಿಲ್ 16ರಿಂದ ಮನೆಗಳ ಪಟ್ಟಿ ಹಾಗೂ ಮನೆಗಳ ಗಣತಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಈ ಗಣತಿ ಕಾರ್ಯ ಮೇ 15ರವರೆಗೆ ನಡೆಯಲಿದ್ದು, ಜಿಲ್ಲೆಯಾದ್ಯಂತ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.
ಈ ಹಂತದಲ್ಲಿ ಮನೆಗಳ ಸ್ಥಿತಿ, ಸೌಲಭ್ಯಗಳು ಹಾಗೂ ಕುಟುಂಬದ ಮೂಲಭೂತ ಮಾಹಿತಿಯನ್ನು ದಾಖಲಿಸಲಾಗುತ್ತದೆ.
ಇದಕ್ಕೂ ಮೊದಲು, ಸಾರ್ವಜನಿಕರಿಗೆ ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿ (Self Enumeration) ಮಾಡುವ ಅವಕಾಶ ನೀಡಲಾಗಿತ್ತು. ಈಗ ನೇರ ಮನೆ ಭೇಟಿ ಮೂಲಕ ಅಂತಿಮ ಮಾಹಿತಿ ಸಂಗ್ರಹ ನಡೆಯಲಿದೆ.
ಜಿಲ್ಲೆಯಲ್ಲಿ ಈ ಕಾರ್ಯಕ್ಕಾಗಿ ಸಾವಿರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಗಣತಿ ಕಾರ್ಯವನ್ನು ನಿಖರವಾಗಿ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.