Uncategorised
“ತತ್ವಮಸಿ” — ಶಬರಿಮಲೆಯ ಆಧ್ಯಾತ್ಮಿಕ ಸಂದೇಶ

ಶಬರಿಮಲೆಯಲ್ಲಿ “ತತ್ವಮಸಿ” ಎಂಬ ವೇದ ವಾಕ್ಯಕ್ಕೆ ವಿಶೇಷ ಮಹತ್ವ ಇದೆ
“ತತ್ವಮಸಿ” ಎಂಬುದು ಸಂಸ್ಕೃತದ ಮಹಾವಾಕ್ಯವಾಗಿದ್ದು,
“ನೀನೇ ಆ ಪರಮಾತ್ಮ” ಅಥವಾ “ನಿನ್ನೊಳಗೂ ದೈವತ್ವ ಇದೆ” ಎಂಬುದು
ಈ ಸಂದೇಶವು ಮನುಷ್ಯರಲ್ಲಿ ಸಮಾನತೆ, ಆತ್ಮಜ್ಞಾನ ಮತ್ತು ಮಾನವೀಯತೆಯನ್ನು ಸಾರುತ್ತದೆ
ಶಬರಿಮಲೆ ಯಾತ್ರೆಯಲ್ಲಿ ಎಲ್ಲ ಭಕ್ತರನ್ನೂ “ಸ್ವಾಮಿ” ಎಂದು ಕರೆಯುವ ಪದ್ಧತಿಯ ಹಿಂದೆ ಕೂಡ ಇದೇ ತತ್ವ ಅಡಗಿದೆ ಎಂದು ಆಧ್ಯಾತ್ಮಿಕ ಪಂಡಿತರು ಹೇಳುತ್ತಾರೆ.
ಮಕರ ಸಂಕ್ರಾಂತಿ ಹಾಗೂ ಮಂಡಲ ಪೂಜೆ ಸಮಯದಲ್ಲಿ ಲಕ್ಷಾಂತರ ಭಕ್ತರು ಶಬರಿಮಲೆ ಯಾತ್ರೆಯಲ್ಲಿ ಭಾಗವಹಿಸಿ
“ಸ್ವಾಮಿಯೇ ಶರಣಂ ಅಯ್ಯಪ್ಪ” ಎಂಬ ಘೋಷಣೆ ಜೊತೆಗೆ “ತತ್ವಮಸಿ” ಸಂದೇಶವನ್ನೂ ಭಕ್ತಿಯಿಂದ ಉಚ್ಚರಿಸುತ್ತಾರೆ
ಭಕ್ತರ ನಂಬಿಕೆಯ ಪ್ರಕಾರ, ಈ ಯಾತ್ರೆ ಕೇವಲ ದೇವರ ದರ್ಶನಕ್ಕೆ ಮಾತ್ರವಲ್ಲ…
ಸ್ವತಃ ತಮ್ಮೊಳಗಿನ ದೈವತ್ವವನ್ನು ಅರಿಯುವ ಆತ್ಮಯಾತ್ರೆಯಾಗಿದೆ