Uncategorised
ಶಬರಿಮಲೆ ನಿರಪುಥರಿ ಮಹೋತ್ಸವ

ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಆಗಸ್ಟ್ 3ರಂದು ನಿರಪುಥರಿ ಮಹೋತ್ಸವ ಭಕ್ತಿಭಾವದಿಂದ ನಡೆಯಲಿದೆ.
ಈ ಮಹೋತ್ಸವದ ಅಂಗವಾಗಿ ಆಗಸ್ಟ್ 2ರಂದು ಸಂಜೆ 5 ಗಂಟೆಗೆ ದೇವಾಲಯದ ನಡ ತೆರೆದು, ವಿಶೇಷ ಪೂಜೆಗಳು ನಡೆಯಲಿವೆ.
ಆಗಸ್ಟ್ 3ರಂದು ಬೆಳಿಗ್ಗೆ 5:40 ರಿಂದ 6:20ರೊಳಗೆ ನಿರಪುಥರಿ ವಿಧಿವಿಧಾನಗಳು ನೆರವೇರಲಿವೆ. ಈ ಸಂದರ್ಭದಲ್ಲಿ ಹೊಸ ಭತ್ತದ ಕದಿರನ್ನು ಅಯ್ಯಪ್ಪ ಸ್ವಾಮಿಗೆ ಸಮರ್ಪಿಸಲಾಗುತ್ತದೆ.
ನಿರಪುಥರಿ ಎಂಬುದು ರೈತರು ತಮ್ಮ ಮೊದಲ ಬೆಳೆಯನ್ನು ಭಗವಂತನಿಗೆ ಅರ್ಪಿಸಿ ಕೃತಜ್ಞತೆ ಸಲ್ಲಿಸುವ ಪವಿತ್ರ ಆಚರಣೆ.
ಸಾವಿರಾರು ಭಕ್ತರು ಈ ವಿಶೇಷ ಮಹೋತ್ಸವದಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಪಡೆಯಲಿದ್ದಾರೆ.
🙏 ಸ್ವಾಮಿಯೇ ಶರಣಂ ಅಯ್ಯಪ್ಪ 🙏