Uncategorised
ಶಬರಿಮಲೆ ಯಾತ್ರಿಕರ ಸಂಖ್ಯೆ 25 ಲಕ್ಷ ದಾಟಿತು 2026

ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಡಲ ಯಾತ್ರಾ ಅವಧಿಯಲ್ಲಿ ಭಕ್ತರ ಸಂಖ್ಯೆಯು 25 ಲಕ್ಷವನ್ನು ದಾಟಿದೆ.ಎಂದು ಎಣಿಕೆಯಲ್ಲಿ ನೀಡಲಾಗಿದೆ
ಈ ವರ್ಷದ ಯಾತ್ರೆಯಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚು ಭಕ್ತರು ಭೇಟಿ ನೀಡಿರುವುದು ಗಮನಾರ್ಹ. ಅಧಿಕಾರಿಗಳ ಮಾಹಿತಿ ಪ್ರಕಾರ, ಈ ಹೆಚ್ಚಿದ ಜನಸಂದಣಿಯ ನಡುವೆಯೂ ದರ್ಶನ ವ್ಯವಸ್ಥೆ ಸುಗಮವಾಗಿ ನಡೆಯುತ್ತಿದೆ.
ಆರಂಭದ ದಿನಗಳಲ್ಲಿ ಭಾರೀ ಗದ್ದಲ ಕಂಡುಬಂದರೂ, ಸಮರ್ಪಕ ವ್ಯವಸ್ಥೆ ಮತ್ತು ನಿಯಂತ್ರಣ ಕ್ರಮಗಳಿಂದ ಪರಿಸ್ಥಿತಿ ಹತೋಟಿಗೆ ತರಲಾಗಿದೆ. ಯಾತ್ರಿಕರು ನಿಗದಿತ ದಿನಾಂಕದಲ್ಲಿ ಆಗಮಿಸಿದರೆ, ಎಲ್ಲರಿಗೂ ಸುಲಭವಾಗಿ ದರ್ಶನ ಸಾಧ್ಯವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಡಲ ಪೂಜೆಯತ್ತ ಯಾತ್ರಿಕರ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಭಕ್ತರ ಸುರಕ್ಷತೆ ಹಾಗೂ ಸುಗಮ ದರ್ಶನಕ್ಕಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೃಪೆ : ಶಬರಿಮಲೆ ಟಿವಿ