ಶಬರಿಮಲೆಯಲ್ಲಿ ಭಕ್ತರಿಗೆ ಪ್ರತಿದಿನ ಸಾಂಪ್ರದಾಯಿಕ ಕೇರಳ ಸದ್ಯೆ – ಅನ್ನದಾನ ಸೇವೆಯಲ್ಲಿ ಮಹತ್ವದ ಬದಲಾವಣೆ

ಶಬರಿಮಲೆ: ಮುಂಬರುವ ಮಂಡಲ-ಮಕರವಿಳಕ್ಕು ಯಾತ್ರಾ ಋತುವಿನಿಂದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ನೀಡಲಾಗುವ ಉಚಿತ ಅನ್ನದಾನ ಸೇವೆಯನ್ನು (ಅನ್ನದಾನಂ) ಮತ್ತಷ್ಟು ಗುಣಮಟ್ಟದ ಹಾಗೂ ವ್ಯವಸ್ಥಿತವಾಗಿ ರೂಪಿಸಲು ತಿರುವಾಂಕೂರು ದೇವಸ್ವಂ ಬೋರ್ಡ್ (TDB) ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಹೊಸ ವ್ಯವಸ್ಥೆಯಡಿ ಮೊದಲ ಬಾರಿಗೆ ಪ್ರತಿದಿನ ಸಾಂಪ್ರದಾಯಿಕ ಕೇರಳ ಸದ್ಯೆ (Sadya) ಜೊತೆಗೆ ಪಾಯಸವನ್ನು ಭಕ್ತರಿಗೆ ಉಣಬಡಿಸಲಾಗುತ್ತದೆ. ಇದುವರೆಗೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ನೀಡಲಾಗುತ್ತಿದ್ದ ಸದ್ಯೆ ಇನ್ನು ಮುಂದೆ ಪ್ರತಿದಿನ ಲಭ್ಯವಾಗಲಿದೆ.
ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಭಕ್ತರ ಊಟದ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಹೊಸ ಕ್ಯಾಟರಿಂಗ್ ವ್ಯವಸ್ಥೆಯನ್ನೂ ಜಾರಿಗೆ ತರಲಾಗುತ್ತಿದೆ. ಇದರಿಂದ ಪ್ರತಿದಿನ ಸಾವಿರಾರು ಅಯ್ಯಪ್ಪ ಭಕ್ತರಿಗೆ ಉತ್ತಮ ಗುಣಮಟ್ಟದ ಪ್ರಸಾದ ರೂಪದ ಅನ್ನದಾನ ದೊರೆಯಲಿದೆ.
ಭಕ್ತರಿಗೆ ಸುಸಜ್ಜಿತ, ಸ್ವಚ್ಛ ಹಾಗೂ ಸಾಂಪ್ರದಾಯಿಕ ಆಹಾರ ವ್ಯವಸ್ಥೆಯನ್ನು ಒದಗಿಸುವ ಈ ಕ್ರಮವು ಶಬರಿಮಲೆ ಯಾತ್ರೆಯನ್ನು ಇನ್ನಷ್ಟು ಸ್ಮರಣೀಯವಾಗಿಸಲಿದೆ.
ಸ್ವಾಮಿ ಶರಣಂ ಅಯ್ಯ
ಪ್ಪ.