Uncategorised
ಶ್ರೀ ಶಬರೀಶ್ ಗುರೂಜಿರವರ ಆಶೀರ್ವಾದದೊಂದಿಗೆ ಚೆನ್ನೈನಲ್ಲಿ ನಡೆದ ನಿಪುಣ ನಾಟ್ಯ ತರಂಗಿಣಿ ಕಾರ್ಯಕ್ರಮ

ಚೆನ್ನೈನ ನಂಗನಲ್ಲೂರು ರಂಜನಿ ಹಾಲ್‌ನಲ್ಲಿ ಏಪ್ರಿಲ್ 5ರಂದು ಸಂಜೆ 6 ಗಂಟೆಗೆ “ನಿಪುನ್ ನಾಟ್ಯತರಂಗಿಣಿ” ಕಾರ್ಯಕ್ರಮದ ವಾಲಿಡಿಕ್ಟರಿ ಸಮಾರಂಭ ನಡೆಯಿತು . ಈ ಕಾರ್ಯಕ್ರಮವನ್ನು ಶ್ರೀ ಶ್ರೀ ಶಬರೀಶ ಗುರುಜಿ ಟ್ರಸ್ಟ್ ಮತ್ತು ಭಾರತ್ ಭಾರತಿ ಸಂಸ್ಥೆಗಳು ಸಂಯುಕ್ತವಾಗಿ ಆಯೋಜಿಸ ಲಾಗಿತ್ತು .
ಈ ಸಂದರ್ಭದಲ್ಲಿ ಭಾರತದ ಉಕ್ಕಿನ ಮಾನವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮವಾರ್ಷಿಕೋತ್ಸವವನ್ನು ಆಚರಿಸಲಾಯಿತು . ಮುಖ್ಯ ಅತಿಥಿಯಾಗಿ ಶ್ರೀ ಶ್ರೀ ಶಬರೀಶ ಗುರುಜಿ ಭಾಗವಹಿಸಿದರು . ಮುಖ್ಯ ಅತಿಥಿಯಾಗಿ ಸಿಎ ನಳಿನಿ ಪದ್ಮನಾಭನ್ ಅವರು ಆಗಮಿಸಿದ್ದರು , ಪ್ರಮುಖ ಭಾಷಣವನ್ನು ಶ್ರೀ ವಿನಯ್ ಪಟ್ರಲೆ ಅವರು ನೀಡಿದ್ದರು.
ಇದೇ ವೇಳೆ ಕಲೈನನ್ಮಣಿ ಲತಾ ಅರವಿಂದನ್ ಅವರಿಗೆ ಭರತನಾಟ್ಯ ಕಲಾ ತಪಸ್ವಿನಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇನ್ನೂ ಹಲವಾರು ಕಲಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.